ಕ್ಯಾಲಿಕೊ

ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿದ್ದ ಸಾದಾ ಅಥವಾ ಮುದ್ರಿತ ಹತ್ತಿಯ ಬಟ್ಟೆಗೆ ಆ ದೇಶಗಳಲ್ಲಿದ್ದ ಹೆಸರು. ಕಲ್ಲಿಕೋಟೆ (ಕ್ಯಾಲಿಕಟ್) ಮತ್ತು ಕಲ್ಕತ್ತಾ ಎರಡೂ ವಸ್ತ್ರೋದ್ಯಮದಲ್ಲಿ ಅಂದು ಪ್ರಸಿದ್ಧ ಕೇಂದ್ರಗಳಾಗಿದ್ದುದರಿಂದ ಆ ಹೆಸರುಗಳ ವ್ಯುತ್ಪನ್ನವಾಗಿ ಕ್ಯಾಲಿಕೊ ಬಂದಿರಬಹುದು. ಗೃಹಕೃತ್ಯಗಳಲ್ಲಿ ಈ ಬಟ್ಟೆಯ ವಿಶೇಷ ಉಪಯೋಗ ಉಂಟು. ಕ್ಯಾಲಿಕೊ ಬಟ್ಟೆಯನ್ನು ಚಲುವೆ ಮಾಡಿರುತ್ತಾರೆ; ಇಲ್ಲವೇ ಮುದ್ರಿಸಿರುತ್ತಾರೆ. 			  					(ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ